ಬೊಜ್ಜು ಎನ್ನುವುದು ನಮ್ಮ ಶರೀರದ ಅಥವಾ ವ್ಯಕ್ತಿತ್ವದ ಆಕರ್ಷಣೆಯನ್ನು ಕುಂದಿಸುತ್ತದೆ. ಜೊತೆಗೆ ಒಂದಿಷ್ಟು ರೋಗಗಳನ್ನು ಆಹ್ವಾನಿಸುವುದು. ಹಾಗಾಗಿ ಎಲ್ಲರೂ ದೇಹದ ತೂಕವನ್ನು ಇಳಿಸಲು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸುತ್ತಾರೆ. ದೇಹದ ಎತ್ತರಕ್ಕೆ ಸರಿಯಾಗಿ ತೂಕವನ್ನು ಹೊಂದಿದ್ದರೆ ದೇಹವು ಆರೋಗ್ಯವಾಗಿರುವುದಲ್ಲದೆ ಆಕರ್ಷಕವಾಗಿ ಕಾಣುವುದು. ನಿತ್ಯ ನಾವು ಸೇವಿಸುವ ಆಹಾರ ಕ್ರಮ ಹಾಗೂ ಜೀವನ ಶೈಲಿಯು ನಮ್ಮ ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ದೇಹದ ತೂಕ ಬಲು ಸುಲಭವಾಗಿ ಇಳಿಸಲು ಸಾಕಷ್ಟು ಹಣ್ಣು ಹಾಗೂ ತರಕಾರಿಗಳು ಸಹಾಯ ಮಾಡುತ್ತವೆ. ಅವುಗಳಲ್ಲಿ ಕಿತ್ತಳೆ ಹಾಗೂ ಗಜರಿಯ ಪಾತ್ರವೂ ಬಹಳ ಪ್ರಮುಖವಾದದ್ದು. ಈ ಎರಡು ನೈಸರ್ಗಿಕ ಘಟಕಗಳಿಂದ ಸಿಗುವ ರಸವು ತೂಕವನ್ನು ಬಹಬೇಗ ಇಳಿಸುವುದು. ಈ ಎರಡು ಪದಾರ್ಥಗಳ ರಸಗಳ ಸಂಯೋಜನೆಯು ಶಕ್ತಿಯುತವಾದ ಶುದ್ಧೀಕರಣದ ಪೇಯಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇವು ದೇಹದ ತೂಕ ನಷ್ಟಗೊಳಿಸುವುದರ ಜೊತೆಗೆ ಆರೋಗ್ಯದ ಸುಧಾರಣೆಗೂ ಸಹಾಯ ಮಾಡುತ್ತದೆ.